h1

ಅಂತಿಮ ಕಂತು ಪ್ರಕರಣ ೧೩೬೯

June 10, 2009

ಪ್ರಸಾರ : ೧೨ ಜೂನ್ ೨೦೦೯, ಶುಕ್ರವಾರ

ಹೊಸಮನೆ ಸದಾನಂದ ತನ್ನ ಕುತ್ತಿಗೆಯನ್ನ ತಾನೇ ಹಿಸುಕಿಕೊಳ್ಳಲು ಆರಂಭಿಸುತ್ತಾನೆ. ಎಲ್ಲರೂ ಬೆರಗಾಗುತ್ತಾರೆ. ಅಲ್ಲಿದ್ದ ಜೈಲರ್‍ ಮತ್ತು ಇತರರು ಹೊಸಮನೆ ಸದಾನಂದನನ್ನು ಬಿಡಿಸುತ್ತಾರೆ. ಹೊಸಮನೆಯು ಹುಚ್ಚನಂತೆ ಮತ್ತೆ ಅಡಿಗರ ’ಕೂಪಮಂಡೂಕ’ ಪದ್ಯದ ಸಾಲುಗಳನ್ನು ಹೇಳುವಾಗ ಪೂರ್‍ವಿ ಅಲ್ಲಿ ನಿಲ್ಲಲಾಗದೆ ಹೊರಡುತ್ತಾಳೆ. ಸುಕನ್ಯಾ ಅವಳ ಹಿಂದೆ ಹೋಗಲಾಗದಂತೆ ಹೊಸಮನೆ ಸದಾನಂದ ಅವಳನ್ನು ಕರೆದು ಮಾತಾಡಿಸುತ್ತಾನೆ. ಸಂದರ್‍ಶಕರ ಕೊಠಡಿಯ ಒಂದು ಮೂಲೆಯಲ್ಲಿ ಕುಸಿದು ಕೂತು ಗೊಣಗುತ್ತಾನೆ.

ಹತಾಶಳಾಗಿ ಮನೆಗೆ ಬರುವ ಪೂರ್‍ವಿಗೆ ಮೇಘಾ ಫೋನ್ ಮಾಡುತ್ತಾಳೆ. ಹೇಗಿತ್ತು ತಾಯಿಯೊಡನೆ ಹೋಗಿದ್ದ ಪ್ರವಾಸ ಎನ್ನುತ್ತಾಳೆ. ಪೂರ್‍ವಿಯು ಜೈಲಿನಲ್ಲಿ ಹೊಸಮನೆಯನ್ನು ನೋಡಿದ ವಿವರ ಹೇಳುತ್ತಾ ಆತ ತನ್ನ ಅಪ್ಪ ಎಂದಾಗ ಮೇಘಾಳಿಗೂ ಅಚ್ಚರಿಯಾಗುತ್ತದೆ. ಪೂರ್‍ವಿಯು ತಾನು ಅನುಭವಿಸುತ್ತಾ ಇರುವ ಸಂಕಟ ಕುರಿತು ತಿಳಿಸುತ್ತಾಳೆ. ಮೇಘಾ ಈ ಕೂಡಲೇ ಅಪ್ಪ(ಮಿತ್ರ)ನ ಮನೆಗೆ ಬಾ ಇನ್ನೊಂದು ಪವಾಡವಿದೆ ಎನ್ನುತ್ತಾಳೆ.

*

ಮಿತ್ರನ ಮನೆಯಲ್ಲಿ ಪ್ರಭುದೇವನನ್ನು ಕಂಡು ಪೂರ್‍ವಿಗೆ ಅಚ್ಚರಿ. ಮೇಘಾ ಮತ್ತು ಕಲ್ಯಾಣಿಯು ಪ್ರಭುವನ್ನ ಅಂಜಲಿಯೇ ಕರೆದು ತಂದಿದ್ದಾಳೆ ಎನ್ನುತ್ತಾರೆ. ಅಂಜಲಿ ತನ್ನ ಅಪ್ಪನಿಗೆ ಅವನ ಮೂರನೇ ಹೆಂಡತಿ ಮೋಸ ಮಾಡಿದ್ದಾಳೆ. ಅವನೀಗ ಮಗುವಾಗಿದ್ದಾನೆ ಎನ್ನುತ್ತಾಳೆ. ಇನ್ನು ಈ ಮಗುವನ್ನು ನೋಡಿಕೊಳ್ಳುವವಳು ನಾನು ಎನ್ನುತ್ತಾಳೆ. ಆಗಲೇ ಮಿತ್ರ ಎಲ್ಲಿ ಎಂದು ಹುಡುಕುವ ಸೋದರಿಯರಿಗೆ ಆತ ಯಾರೋ ಗೆಳೆಯರನ್ನು ನೋಡ ಹೋಗಿದ್ದಾರೆ ಎಮದು ತಿಳಿಸುವ ಅನುಸೂಯ. ಮಿತ್ರ ಅವರಿಗಾಗಿ ಕೊಟ್ಟಿರುವ ಕವರ್‍ರನ್ನು ನೀಡುತ್ತಾಳೆ. ಆ ಕವರ್‍ರಿನಲ್ಲಿರುವ ಸಿಡಿಯನ್ನು ನೋಡಿ ಎಲ್ಲರೂ ಅಚ್ಚರಿ ಪಡುತ್ತಲೇ ಅದನ್ನು ಪ್ಲೇಯ‌ರ್‍ಗೆ ಹಾಕುತ್ತಾರೆ. ಮಿತ್ರ ತಾನು ಬೆಳೆಸಿದ ಹಕ್ಕಿಗಳ ಜೊತೆಗೆ ಮಾತಾಡುತ್ತಾನೆ. ಮಿತ್ರ ತಾನು ತಂಬೂರಿಯಾದದ್ದು. ತನ್ನೊಂದಿಗೆ ಬೆಳೆದ ಹಕ್ಕಿಗಳೆಲ್ಲ ತಂತಿಯಾಗಿ ಶೃತಿ ಸೇರಿ ಸಂಗೀತವಾಗಿದ್ದನ್ನು ತಿಳಿಸುತ್ತಾನೆ. ಎಲ್ಲರೂ ಅಚ್ಚರಿಯಲ್ಲಿ ಉಳಿಯುತ್ತಾರೆ.

*

ಮಿತ್ರ ತನ್ನ ಮರದಲ್ಲಿ ಬೆಳೆದ ಹಕ್ಕಿಗಳು ಹಾರುವುದನ್ನು ಕಲಿತಿವೆ. ಅವುಗಳಿಗೆ ತನ್ನ ಅಗತ್ಯವಿಲ್ಲವೆಂದು ತಾನು ಅಗತ್ಯ ಇರುವ ಹೊಸ ಹಕ್ಕಿಗಳನ್ನು ಹುಡುಕಿ ಹೊರಟಿದ್ದೇನೆ ಎನ್ನುತ್ತಾನೆ. ನಾಲ್ವರು ಅಕ್ಕ-ತಂಗಿಯರು ಮಾತಾಡದ ಸ್ಥಿತಿ ತಲುಪುತ್ತಾರೆ. ಅವರ್‍ಯಾರೂ ತನ್ನನ್ನ ಹುಡುಕುವುದು ಬೇಡ ಎನ್ನುವ ಮಿತ್ರ ಅವರೆಲ್ಲರ ಜವಾಬ್ದಾರಿಗಳನು ನೆನಪಿಸುತ್ತಾನೆ. ಜೀವನದ ಕಡೆಯ ಹನಿಯವರಗೆ ಬದುಕಿ ಎಂದು ಹರಸುತ್ತಾನೆ. ಸೋದರಿಯರು ಕೊರಗುತ್ತಾ ತಮ್ಮ ತಮ್ಮ ಕೆಲಸಗಳಿಗೆ ಹೊರಟಾಗ ಕಲ್ಯಾಣಿಯು ಮಿತ್ರನಿಗಾಗಿ ಕೊರಗುತ್ತಾಳೆ.

ನಾಲ್ವರು ಪುಟ್ಟ ಹೆಣ್ಣುಮಕ್ಕಳಿಗಾಗಿ ವಚನ ಹೇಳಿಕೊಡುತ್ತಾ ದೂರಕ್ಕೆ ಸಾಗುವ ಮಿತ್ರ ಕ್ಯಾಮೆರಾಗೆ ಕಾಣುತ್ತಾನೆ.

ನಾಕುತಂತಿಯ ನಿರ್‍ದೇಶಕರು ಕ್ಯಾಮೆರಾದ ಎದುರಿಗೆ ಕಾಣಿಸಿಕೊಂಡು ನಾಕುತಂತಿಯನ್ನು ಆರುವರ್ಷಗಳ ಕಾಲ ಸಲಹಿದ ಬಂಧುಗಳಿಗೆ ನಮಸ್ಕಾರ ಹೇಳುತ್ತಾರೆ ಮತ್ತು ಕೆಲವು ದಿನಗಳ ವಿರಾಮದ ನಂತರ ನಮ್ಮ ತಂಡ ಹೊಸಕತೆಯೊಡನೆ ನಿಮ್ಮೆದುರಿಗೆ ಬರಲಿದ ಎಂದು ತಿಳಿಸುತ್ತಾರೆ.

* * *

ಇಲ್ಲಿಗೆ ’ನಾಕುತಂತಿ’ಯ ಪ್ರಯಾಣ ಮುಗಿಯುತ್ತದೆ.

೨೦೦೪ರ ಮಾರ್‍ಚಿ ತಿಂಗಳ ೨೭ನೇ ತಾರೀಖು ಆರಂಭವಾದ ಈ ಪ್ರಯಾಣ ೨೦೦೯ರ ಜೂನ್ ೧೨ಕ್ಕೆ ಮುಗಿಯುತ್ತಿದೆ.

ನಾಕುತಂತಿಯ ಎಲ್ಲಾ ಅಭಿಮಾನಿಗಳಿಗೆ ಈ ಕತೆಯನ್ನು ಬರೆದು ನಿರ್‍ದೇಶಿಸಿದ ಬಿ.ಸುರೇಶ ಹಾಗೂ ’ನಾಕುತಂತಿ’ ತಂಡದ ನಮನಗಳು.

Advertisements
h1

ಪ್ರಕರಣ ೧೩೬೮

June 10, 2009

ಪ್ರಸಾರ : ೧೧ ಜೂನ್ ೨೦೦೯, ಗುರುವಾರ

ಪೂರ್‍ವಿಯನ್ನು ತಡೆಯುವ ಸುಕನ್ಯಾ, ’ನಿನಗೆ ಜೀವ ಕೊಟ್ಟವನ ಸಾವನ್ನು ನೀನೇ ಬಯಸದಿರು’ ಎನ್ನುತ್ತಾಳೆ. ದೊಡ್ಡ ಸತ್ಯವನ್ನು ತಿಳಿಯುವ ಪೂರ್‍ವಿಯು ಬೆರಗಾಗುತ್ತಾಳೆ. ಹೊಸಮನೆ ಸದಾನಂದನೇ ತನ್ನ ತಂದೆಯೇ ಎಂದು ಕೇಳುವ ಪೂರ್‍ವಿಗೆ ಹೌದು ಎನ್ನುವ ಸುಕನ್ಯಾ ತಾನು ಹೇಗೆ ಅವನ ಬಲೆಗೆ ಬಿದ್ದೆ ಎಂಬುದನ್ನ ಸೂಕ್ಷ್ಮವಾಗಿ ತಿಳಿಸುತ್ತಾಳೆ. ಜೈಲು ಸೇರಿರುವ ಆ ನಿನ್ನ ತಂದೆಯೂ ಪಶ್ಚಾತ್ತಾಪದಲ್ಲಿ ನರಳುತ್ತಾನೆ, ಮನುಷ್ಯನಾಗುತ್ತಾನೆ ಎನ್ನುವ ಸುಕನ್ಯಾಗೆ ನನ್ನೊಂದಿಗೆ ಬರುವಿರಾ ಎನ್ನುವ ಪೂರ್‍ವಿಯೂ ತಾನು ತನಗೆ ಜೀವ ಕೊಟ್ಟವನನ್ನು ನೋಡಬೇಕು ಎನ್ನುತ್ತಾಳೆ. ಸುಕನ್ಯಾ ಅಚ್ಚರಿಯಲ್ಲಿ ನಿಲ್ಲುತ್ತಾಳೆ.

*

ಜೈಲಿನ ಸೆಲ್ಲಿನಲ್ಲಿರುವ ಹೊಸಮನೆ ಸದಾನಂದನಿಗೆ ಬಿಳಿಯ ಸಮವಸ್ತ್ರ ನೀಡುವ ಜೈಲರ್‍. ಹೊಸಮನೆ ಸದಾನಂದ ಹುಚ್ಚನಂತೆ ಮಾತು ಸಾಯಬೇಕು ಎಂಬ ಮಾತಾಡುತ್ತಾನೆ. ಆತನನ್ನು ನೋಡಲು ಈಗ ಮುಖ್ಯಮಂತ್ರಿ ಆಗಿರುವ ಸುಕನ್ಯಾ ಬಂದಿದ್ದಾರೆ ಎನ್ನುವ ಜೈಲರ್‍ ಮಾತು ಕೇಳಿ ಬಟ್ಟೆ ಧರಿಸುವ ನಿರ್‍ಧಾರಕ್ಕೆ ಬರುವ ಹೊಸಮನೆ ಸದಾನಂದ.

ಸಂದರ್‍ಶಕರ ಕೊಠಡಿಗೆ ಬರುವ ಹೊಸಮನೆ ಸದಾನಂದನನ್ನು ನೋಡಿ ಸುಕನ್ಯಾಗೆ ಸಂಕಟವಾಗುತ್ತದೆ. ಮಾತಾಡದೆ ಕೂತವನನ್ನು ಮಾತಾಡಿಸಲು ಆಕೆ ಪ್ರಯತ್ನಿಸುತ್ತಾಳೆ. ಹೊಸಮನೆಯು ಸುಕನ್ಯಾಳನ್ನು ಮೊದಲು ಬೇಟಿಯಾದಾಗ ಹೇಳಿದ ಅಡಿಗರ ‘ಕೂಪಮಂಡೂಕ’ ಪದ್ಯವನ್ನು ಹೇಳುತ್ತಾಳೆ. ಹೊಸಮನೆ ಸದಾನಂದ ಪದ್ಯವನ್ನು ನೆನೆದು ತಾನು ಸಾಲು ಹೇಳುವಾಗ ಹುಚ್ಚನಂತೆ ಆಡುತ್ತಾನೆ. ಅದನ್ನು ನೋಡಿ ಅಚ್ಚರಿ ಅನುಕಂಪದಲ್ಲಿ ಉಳಿಯುವ ಪೂರ್‍ವಿ.

*

ಹೊಸಮನೆ ಸದಾನಂದನಿಗೆ ಆತನ ಮಗಳು ಪೂರ್‍ವಿಯೆಂದು ತಿಳಿದು ಬೆರಗಾಗುತ್ತದೆ. ಪೂರ್‍ವಿಯೂ ತನಗಾಗಿ ಅಷ್ಟೆಲ್ಲಾ ಜನರನ್ನು ಕೊಂದವನಿಗೆ ತಾನೇ ಎದುರಿಗೆ ಬಂದಾಗ ಮಾತು ಸಾಯಿತೇ ಎಂದು ಕೇಳುತ್ತಾಳೆ. ಸುಕನ್ಯಾಳು ಇಷ್ಟೂ ದಿನ ಈ ಸತ್ಯವನ್ನು ಮುಚ್ಚಿಟ್ಟು ಒಳ್ಳೆಯದು ಮಾಡಿದಳು ಎನ್ನುವ ಹೊಸಮನೆ ಸದಾನಂದ ತನ್ನ ಕುತ್ತಿಗೆಯನ್ನ ತಾನೇ ಹಿಸುಕಿಕೊಳ್ಳಲು ಆರಂಭಿಸುತ್ತಾನೆ. ಎಲ್ಲರೂ ಬೆರಗಾಗುತ್ತಾರೆ.

h1

ಪ್ರಕರಣ ೧೩೬೭

June 9, 2009

ಪ್ರಸಾರ : ೧೦ ಜೂನ್ ೨೦೦೯, ಬುಧವಾರ

ಹೊಸಮನೆಯು ಮಾಡಿರುವ ಕೊಲೆಗಳಿಗೆಲ್ಲಾ ಸಾಕ್ಷಿ ಸಿಕ್ಕಿದೆ. ನಾಳೆ ಆತನನ್ನ ಅರೆಸ್ಟ್ ಮಾಡಲು ಪೋಲೀಸರು ಬರಲಿದ್ದಾರೆ ಎಂದು ಮೇಘಾ ವಿವರಿಸಿದಾಗ ಹೊಸಮನೆ ಗಾಬರಿಯಾಗುತ್ತಾನೆ. ನಿಖಿಲ್‌ನ ನೆನೆಪಿಗಾಗಿ ಹೊಸಮನೆ ಸದಾನಂದ ಕೊಟ್ಟ ಹೂವನ್ನು ಇಟ್ಟುಕೊಳ್ಳುತ್ತೇನೆ ಎನ್ನುವ ಮೇಘಾಳ ಮಾತು ಕೇಳಿ ಅವಸರದಿಂದ ಹೊರಡುವ ಹೊಸಮನೆ ಸದಾನಂದ
ಹೊಸಮನೆ ಸದಾನಂದನ ಮನೆಯಲ್ಲಿ ಕವಿತಾಳ ಮದುವೆಯ ಸಂಭ್ರಮಕ್ಕಾಗಿ ಪಾಯಸ ತಿನ್ನುತ್ತಾ ಇರುವ ರಾಂರಾವ್ ನಾಯಕ್, ದಾವಣಗೇರಿ, ಕೋಟಾ ಅವರಿಗೆ ಇಂದೇ ನಾಣು ನಾಮಪತ್ರ ಸಲ್ಲಿಸುವೆ ಎನ್ನುವ ಹೊಸಮನೆ ಸದಾನಂದನ ಮಾತು ಕೇಳಿ ಅಚ್ಚರಿಯಾಗುತ್ತದೆ. ಹೊಸಮನೆಯು ಅವರೊಂದಿಗೆ ನಾಮಪತ್ರ ಸಲ್ಲಿಸಲೆಂದು ಹೊರಟಾಗ ಬರುವ ಎಸಿಪಿಯವರು ಆತನನ್ನು ನಂದಿತಾ ಮತ್ತು ಶ್ಯಾಮಲಾ ಕೊಲೆ ಪ್ರಕರಣದಲ್ಲಿ ಬಂಧಿಸುತ್ತಾ ಇರುವುದಾಗಿ ಹೇಳಿ ಕೋಳ ಹಾಕುತ್ತಾರೆ.

*

ಹೊಸಮನೆ ಸದಾನಂದನಿಗೆ ಜಾಮೀನು ಸಿಗುವುದು ಸಹ ಕಷ್ಟ ಎಂದು ತಿಳಿಯುವ ಜೊತೆಗಾರರು ಪಕ್ಷಾಂತರ ಮಾಡುವ ಮಾತಾಡುವಾಗ ಮನೆಯಾಚೆ ಹೊಸಮನೆಯನ್ನು ಮಾಧ್ಯಮದವರು ಮುತ್ತಿಕೊಂಡು ಪ್ರಶ್ನೆ ಕೇಳುತ್ತಾರೆ. ಆಗಲೇ ಅಲ್ಲಿಗೆ ಬರುವ ಮೇಘಾಳು ಅವನಿಗೆ ಶುಭ ಕೋರಿ ಹೂಗುಚ್ಛ ಕೊಡುತ್ತಾಳೆ. ಯಾರಿಗೂ ಪ್ರತಿಕ್ರಿಯಿಸದೆ ಸಾಗುವ ಹೊಸಮನೆ ಸದಾನಂದ. ಎಸಿಪಿಯು ಮೇಘಾಳಿಗೆ ಕಲ್ಯಾಣಿಯ ವಿಷಯ ತಿಳಿಸುತ್ತಾ ಅವಳ ತಂದೆ ಮತ್ತು ಗಂಡನ ಬಿಡುಗಡೆಯಾಗಿದೆ ಎನ್ನುತ್ತಾರೆ.
ಕಲ್ಯಾಣಿಯ ಮನೆಗೆ ಬರುವ ಸುಬ್ಬರಾಮು ಮತ್ತು ಸುಧೀಂದ್ರನ್ನ ನೋಡಿ ಲಲಿತೆ ಮತ್ತು ಕಲ್ಯಾಣಿಯ ಅತ್ತೆಯು ಸಂಭ್ರಮ ಪಡುತ್ತಾರೆ. ಮನೆಯಲ್ಲಿರುವ ಫಾತಿಮಾ ಮತ್ತು ಅವಳ ಮಗುವನ್ನು ಕಲ್ಯಾಣಿಯು ನೋಡಿಕೊಳ್ಳುತ್ತಾ ಇರುವ ವಿವರ ತಿಳಿಯುವ ಸುಧೀಂದ್ರನು ಇನ್ನುಮುಂದೆ ತಾನು ಕಲ್ಯಾಣಿಯ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತೇನೆ ಎಂದಾಗ ಕಲ್ಯಾಣಿಗೆ ನೆಮ್ಮದಿ ಮೂಡುತ್ತದೆ.

*

ಪೂರ್‍ವಿಯು ಹೊಸಮನೆ ಸದಾನಂದ ಬಂಧಿತನಾದ ಎಂದು ಸಂಭ್ಮಿಸುತ್ತಾಳೆ. ಗಳ ಸಂತಸ ನೋಡಿ ತಾನೂ ಸಂತಸ ಪಡುವ ಸುಕನ್ಯಾ. ಹೊಸಮನೆ ಸದಾನಂದನಿಗೆ ಜೀವಾವಧಿ ಶಿಕ್ಷೆಯಾದರೆ ಸಾಲದು ಅವನಿಗೆ ಮರಣದಂಡನೆಯಾಗಬೇಕು ಎಂದು ಪೂರ್‍ವಿಯೂ ಕುಪಿತಳಾಗಿ ಮಾತಾಡುವಾಗ ಅವಳನ್ನು ತಡೆಯುವ ಸುಕನ್ಯಾ, ’ನಿನಗೆ ಜೀವ ಕೊಟ್ಟವನ ಸಾವನ್ನು ನೀನೇ ಬಯಸದಿರು’ ಎನ್ನುತ್ತಾಳೆ. ದೊಡ್ಡ ಸತ್ಯವನ್ನು ತಿಳಿಯುವ ಪೂರ್‍ವಿಯು ಬೆರಗಾಗುತ್ತಾಳೆ.

h1

ಪ್ರಕರಣ ೧೩೬೬

June 9, 2009

ಪ್ರಸಾರ : ೦೯ ಜೂನ್ ೨೦೦೯, ಮಂಗಳವಾರ

ಬೇಸರದಿಂದ ಇರುವ ಸುಕನ್ಯಾಳ ಜೊತೆಗೆ ನಂದಿತಾ ಸಾವಿನ ಕುರಿತು ಮಾತಾಡುವ ಪೂರ್‍ವಿ. ಆಗಲೇ ಅಲ್ಲಿಗೆ ಬರುವ ಮೇಘಾಳಿಗೆ ಈಗಲಾದರೂ ಚುನಾವಣೆಗೆ ನಿಲ್ಲು ಎಂದು ಒತ್ತಾಯಿಸುವ ಸುಕನ್ಯಾ. ಎಲ್ಲರ ಒತ್ತಾಯಕ್ಕೆ ಮೇಘಾ ಒಪ್ಪುತ್ತಾಳೆ. ಪೂರ್‍ವಿಯೇ ಅವಳನ್ನು ನಾಮಪತ್ರ ಸಲ್ಲಿಸಲು ಕರೆದೊಯ್ಯುತ್ತಾಳೆ. ಸುಕನ್ಯಾ ಅಲ್ಲಿದ್ದ ಜಗ್ಗನಿಗೆ ಈ ಕೂಡಲೇ ವಿಷಯ ಹೊಸಮನೆಗೆ ತಲುಪಿಸಲು ವ್ಯವಸ್ಥೆ ಮಾಡು ಎನ್ನುತ್ತಾಳೆ.
ಹೊಸಮನೆ ಸದಾನಂದನಿಗೆ ಮೇಘಾ ಆತನ ಎದುರು ಚುನಾವಣೆಯಲ್ಲಿ ನಿಲ್ಲುತ್ತಾಳೆ ಎಂದು ತಿಳಿದು ಅಚಚರಿಯಾಗುತ್ತದೆ. ಆತ ನಾಳೆಯೇ ಅವಳ ಮನೆಗೆ ಹೋಗಿ ಹೂಗುಚ್ಛ ಕೊಡೋಣ ಎಂದೆನ್ನುತ್ತಲೇ ಹೊಸ ಹೆಣ ಉರುಳಿಸುವ ಯೋಜನೆ ಹಾಕುತ್ತಾನೆ.

*

ಯಾವುದೋ ಕೆಲಸ ಮಾಡುತ್ತಾ ಇದ್ದ ಮೇಘಾಳಿಗೆ ಹೊಸಮನೆ ಸದಾನಂದನೇ ತನ್ನ ಕಛೇರಿಗೆ ಬಂದಿದ್ದಾನೆ ಎಂದು ದೇವಯ್ಯ ನಂದ್ಗುಡಿಯಿಂದ ತಿಳಿದು ಅಚ್ಚರಿಯಾಗುತ್ತದೆ. ಆತನ ಭೇಟಿಗೆ ಬರುವವಳಿಗೆ ಹೂಗುಚ್ಛ ಕೊಡುವ ಹೊಸಮನೆ ಸದಾನಂದನ ಕಾಲೆಳೆದು ಮಾತಾಡುವ ಮೇಘಾ ಆತ ಈ ಸಲ ಚುನಾವಣೆಗೆ ನಿಲ್ಲುವುದೇ ಅಸಾಧ್ಯ ಎಂದಾಗ ಅಚ್ಚರಿಯಲ್ಲಿ ಉಳಿಯುವ ಹೊಸಮನೆ ಸದಾನಂದ

*

ಹೊಸಮನೆಯು ಮಾಡಿರುವ ಕೊಲೆಗಳಿಗೆಲ್ಲಾ ಸಾಕ್ಷಿ ಸಿಕ್ಕಿದೆ. ನಾಳೆ ಆತನನ್ನ ಅರೆಸ್ಟ್ ಮಾಡಲು ಪೋಲೀಸರು ಬರಲಿದ್ದಾರೆ ಎಂದು ಮೇಘಾ ವಿವರಿಸಿದಾಗ ಹೊಸಮನೆ ಗಾಬರಿಯಾಗುತ್ತಾನೆ.

h1

ಪ್ರಕರಣ ೧೩೬೫

June 6, 2009

ಪ್ರಸಾರ : ೦೮ ಜೂನ್ ೨೦೦೯, ಸೋಮವಾರ

ಈ ಪುಸ್ತಕ ಬಿಡುಗಡೆ ತಪ್ಪಿಸುವುದರಿಂದ ಯಾವ ಉಪಯೋಗವೂ ಇಲ್ಲ, ಈಗ ಮುಚ್ಚಬೇಕಿರುವುದು ನಿಮ್ಮ ಮಡದಿಯ ಬಾಯನ್ನು ಎನ್ನುತ್ತಾಳೆ ಕವಿತಾ ಬೈಲಹೊಂಗಲ. ಆಕೆಯ ಸಾಕ್ಷಿಯಿಂದ ನಿಮಗೆ ಜೈಲಾಗಬಹುದು ಎನ್ನುವ ಮಾತು ಕೇಳಿ ಹೊಸಮನೆ ಸದಾನಂದ ಭಯದೊಡನೆ ನಿಲ್ಲುತ್ತಾನೆ. ನಂದಿತಾ ಕೋರ್‍ಟಲ್ಲಿ ಮಾತಾಡಿದರೆ ಆಗಬಹುದಾದ ಅನಾಹುತಗಳನ್ನು ಕುರಿತು ಆಕೆ ಹೇಳುವ ಮಾತು ಕೇಳಿ ನಿರ್‍ಧಾರಕ್ಕೆ ಬರುವ ಹೊಸಮನೆ ಸದಾನಂದನು ತನ್ನ ವಿರುದ್ಧ ಮಾತಾಡುವವರೆಲ್ಲರ ಬಾಯಿ ಮುಚ್ಚಿಸುತ್ತೇನೆ ಎನ್ನುತ್ತಾನೆ.

*

ಮೇಘಾಳ ಜೊತೆಗೆ ಮಾತಾಡುತ್ತಾ ಇರುವ ಪೂರ್‍ವಿಯು ಶ್ಯಾಮಲಾಳ ಸಾವನ್ನು ಕುರಿತು ಕೊರಗುತ್ತಾಳೆ. ಆಗಲೇ ಅವಳಿಗೆ ಬರುವ ಫೋನ್ ಕರೆಯಿಂದ ನಂದಿತಾ ತೀರಿಕೊಂಡಿದ್ದಾರೆ ಎಂದು ತಿಳಿಯುತ್ತದೆ. ಅವರೆಲ್ಲರೂ ಗಾಬರಿಯಾಗಿ ಹೊರಡುತ್ತಾರೆ.

*

ನಂದಿತಾ ಮನೆಯ ಬಾಗಿಲಲ್ಲಿ ಸಿಗುವ ಎಸಿಪಿಯು ನಂದಿತಾ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂದಾಗ ಅದು ಕೊಲೆ ಎನ್ನುವ ಪೂರ್‍ವಿಯನ್ನು ಸಾಕ್ಷಿಯಿದೆಯೇ ಎಂದು ಆತ ಕೇಳುತ್ತಾನೆ. ಉತ್ತರವಿಲ್ಲದ ಮೇಘಾ, ಪೂರ್‍ವಿ, ನಂದ್ಗುಡಿ ಮನೆಯೊಳಗೆ ಸಾಗುತ್ತಾರೆ.
ಮನೆಯೊಳಗೆ ಮಾಧ್ಯಮದವರಿಗೆ ತನ್ನ ಮಡದಿಯ ಕುರಿತು ಮಾತಾಡುತ್ತಾ ಇರುವ ಹೊಸಮನೆ ಸದಾನಂದ. ಆತನ ಮಾತು ಕೇಳಿ ಸಿಟ್ಟಾಗುವ ಪೂರ್‍ವಿಯು ಅವನ ಕಾಲರ್‍ ಹಿಡಿದು ಕೊಲೆಗಾರ ಎನ್ನುತ್ತಾಳೆ. ಅಲ್ಲಿದ್ದವರೆಲ್ಲ ಅವಳನ್ನು ಬಿಡಿಸಿ ದೂರ ತಳ್ಳುತ್ತಾರೆ. ಮೇಘಾ ಅವಳಿಗೆ ಕೋಪ ಸರಿಯಲ್ಲ ಎಂದು ಹೇಳಿ ನಂದಿತಾ ದೇಹ ಇರುವಲ್ಲಿಗೆ ಕರೆದೊಯ್ಯುತ್ತಾಳೆ.
ಕೋಣೆಯಲ್ಲಿ ನಂದಿತಾರನ್ನು ನೋಡಿ ಪೂರ್‍ವಿಯು ಅಳುವಾಗಲೇ ಅಲ್ಲಿರುವ ಜಗ್ಗನ್ನಾಥ ನೀವೇ ಈಕೆಯನ್ನು ಕೊಂದಿರಿ ಎನ್ನುತ್ತಾನೆ. ಆ ಮಾತು ಕೇಳಿ ಪೂರ್‍ವಿ ಬೆರಗಾಗುತ್ತಾಳೆ.

h1

ಪ್ರಕರಣ ೧೩೬೪

June 4, 2009

ಪ್ರಸಾರ : ೦೫ ಜೂನ್ ೨೦೦೯, ಶುಕ್ರವಾರ

ಮೇಘಾಗೆ ಪೂರ್‍ವಿಯು ಫೋನ್ ಮಾಡಿ ಶ್ಯಾಮಲಾ ತೀರಿಕೊಂಡಿದ್ದಾಳೆ ಎನ್ನುತ್ತಾಳೆ. ಮೇಘಾ ಅಚ್ಚರಿಯಲ್ಲಿ ಉಳಿಯುತ್ತಾಳೆ. ಮೇಘಾಳು ಈ ಕೂಡಲೇ ಶ್ಯಾಮಲಾ ಮನೆಗೆ ಬರಬೇಕು ಎನ್ನುವ ಪೂರ್‍ವಿಯ ಮಾತಿನಂತೆ ಬರುವೆ ಎನ್ನುವ ಮೇಘಾ.
ಶ್ಯಾಮಲಾಳ ದೇಹ ನೋಡಿ ಅಳುತ್ತಿರುವ ಜಗ್ಗನಿಗೆ ಸಾಂತ್ವನ ಹೇಳುವ ಸುಕನ್ಯಾ. ಅಲ್ಲಿರುವ ಎ.ಸಿ.ಪಿ.ಗೆ ತನಿಖೆಯ ವಿವರಗಳನ್ನು ತಿಳಿಸಿ ಎನ್ನುತ್ತಾಳೆ. ಆಗಲೇ ಬರುವ ಪೂರ್‍ವಿ, ಮೇಘಾ ಮತ್ತು ನಂದ್ಗುಡಿ. ಅವರಿಗೂ ಶ್ಯಾಮಲಾಳ ದೇಹವನ್ನು ನೋಡಿ ಸಂಕಟವಾಗುತ್ತದೆ. ಎಸಿಪಿಯು ಸುಕನ್ಯಾ ಜೊತೆಗೆ ಮಾತಾಡುತ್ತಾ ಶ್ಯಾಮಲಾರ ಮನೆಯ ಮಾಲೀಕರು ಸುಕನ್ಯಾ ಅಲ್ಲವೇ ಎಂದಾಗ ಅಲ್ಲ ಎನ್ನು ಪೂರ್‍ವಿಯು ಈ ಮನೆ ತನ್ನ ಕಂಪೆನಿಯದು ಎನ್ನುತ್ತಾಳೆ. ಎಸಿಪಿಯು ಮರಣೋತ್ತರ ಪರೀಕ್ಷೆಗೆ ಸಾಗಿದಾಗ ಮೇಘಾ, ಪೂರ್‍ವಿಯ ಜೊತೆಗೆ ಪ್ರತ್ಯೇಕ ಮಾತಿಗೆ ಕರೆಯುವ ಸುಕನ್ಯಾ.
ಸಧ್ಯಕ್ಕೆ ಶ್ಯಾಮಲಾಳ ಜೀವನ ಚರಿತ್ರೆ ಬಿಡುಗಡೆಯಾಗುವುದು ಬೇಡ ಎನ್ನುವ ಸುಕನ್ಯಾಗೆ ಅಚ್ಚರಿಯಾಗುವಂತೆ ಅದು ಬಿಡುಗಡೆಯಾಗಿಯೇ ಆಗುತ್ತದೆ ಎನ್ನುವ ಪೂರ್‍ವಿ. ಅವಳ ಮಾತಿಂದ ಉಳಿದವರಿಗೆ ಬೆರಗು.

*

ಪೂರ್‍ವಿಗೆ ತಿಳುವಳಿಕೆ ಹೇಳುವ ಸುಕನ್ಯಾ ಪ್ರಯತ್ನವು ಸೋಲುತ್ತದೆ. ಆಗಲೇ ಅಲ್ಲಿಗೆ ಬರುವ ಜಗ್ಗ ಸಹ ಇನ್ನಾದರೂ ಶ್ಯಾಮಲಾ ಚರಿತ್ರೆಯನ್ನು ಪ್ರಕಟಿಸುವ ಕೆಲಸ ನಿಲ್ಲಿಸಿ ಎಂದಾಗ ಪೂರ್‍ವಿ ಅವನ ಮೇಲೂ ಹರಿಹಾಯುತ್ತಾಳೆ. ಸುಕನ್ಯಾ ಅವಳಿಗೆ ಸುಮ್ಮನಿರು ಎಂದು ಅಧಿಕಾರ ಚಲಾಯಿಸ ಹೋದಾಗ ತಾನು ತೆಗೆದುಕೊಂಡ ತೀರ್‍ಮಾನದಂತೆಯೇ ಎಲ್ಲವೂ ಆಗಲಿದೆ ಎನ್ನುತ್ತಾಳೆ ಪೂರ್‍ವಿ.
ಪೂರ್‍ವಿಯ ಮನೆಗೆ ಬರುವ ಹೊಸಮನೆ ಸದಾನಂದ ಮನೆಯಲ್ಲಿ ಯಾರೂ ಇಲ್ಲದ್ದನ್ನು ಕಂಡು ಅಚ್ಚರಿಯಲ್ಲಿ ಇರುವಾಗಲೇ ಮನೆಯೊಳಗಿಂದ ಬರುವ ನಂದಿತಾ ಆತನನ್ನು ಕೊಲೆಗಡುಕ ಎನ್ನುತ್ತಾಳೆ.

*

ನಂದಿತಾಳ ಆರೋಪ ಕೇಳಿ ಅವಳ ಕುತ್ತಿಗೆ ಹಿಸುಕಲು ಹೊಸಮನೆ ಸದಾನಂದ ಹೊರಡುತ್ತಾನೆ. ಆಗಲೇ ಅಲ್ಲಿಗೆ ಪೂರ್‍ವಿ ಬರುತ್ತಾಳೆ. ಅದರಿಂದಾಗಿ ನಂದಿತಾ ಉಳಿಯುತ್ತಾಳೆ. ಪೂರ್‍ವಿಗೆ ಶ್ಯಾಮಲಾ ಸಾವಿನ ಕುರಿತಂತೆ ಶ್ರದ್ಧಾಂಜಲಿ ತಿಳಿಸುವ ನಾಟಕ ಮಾಡಿ ಹೊಸಮನೆ ಸದಾನಂದ ಹೊರಡುತ್ತಾನೆ. ನಂದಿತಾ ಇಂತಹವರು ನಮ್ಮನ್ನು ಮುಗಿಸುವ ಪ್ರಯತ್ನ ಮಾಡಿದರೂ ನಾವು ಸೋಲಬಾರದು ಎನ್ನುತ್ತಾಳೆ. ಪೂರ್‍ವಿಯೂ ನಿರ್‍ಧಾರಕ್ಕೆ ಬರುತ್ತಾಳೆ,
ಹೊಸಮನೆಯು ಈ ಪುಸ್ತಕ ಬಿಡುಗಡೆ ತಪ್ಪಿಸುವ ಕುರಿತು ಮಾತಾಡಿದಾಗ ಅದನ್ನು ನಿಲ್ಲಿಸುವುದರಿಂದ ಯಾವ ಉಪಯೋಗವೂ ಇಲ್ಲ, ಈಗ ಮುಚ್ಚಬೇಕಿರುವುದು ನಿಮ್ಮ ಮಡದಿಯ ಬಾಯನ್ನು ಎನ್ನುತ್ತಾಳೆ ಕವಿತಾ ಬೈಲಹೊಂಗಲ. ಆಕೆಯ ಸಾಕ್ಷಿಯಿಂದ ನಿಮಗೆ ಜೈಲಾಗಬಹುದು ಎನ್ನುವ ಮಾತು ಕೇಳಿ ಹೊಸಮನೆ ಸದಾನಂದ ಭಯದೊಡನೆ ನಿಲ್ಲುತ್ತಾನೆ.

h1

ಪ್ರಕರಣ ೧೩೬೩

June 3, 2009

ಪ್ರಸಾರ : ೦೪ ಜೂನ್ ೨೦೦೯, ಗುರುವಾರ

ಪೂರ್‍ವಿಯು ಶ್ಯಾಮಲಾ ಬರೆದಿರುವ ಜೀವನಚರಿತ್ರೆ ಬಿಡುಗಡೆಯಾಗಲಿದೆ ಎಂದು ತಿಳಿಸಿದಾಗ ಹೊಸಮನೆ ಸದಾನಂದ ಅಚ್ಚರಿಯಲ್ಲಿ ಉಳಿಯುತ್ತಾನೆ. ಪೂರ್‍ವಿಯ ಮಾತುಗಳಿಂದ ಹೊಸಮನೆ ಕೋಪಗೊಳ್ಳುವಾಗಲೇ ಅಲ್ಲಿಗೆ ಬರುವ ನಂದಿತಾಯಿಂದಾಗಿ ಅವರಿಬ್ಬರ ಜೀವ ಉಳಿಯುತ್ತದೆ. ಪೂರ್‍ವಿ, ಶ್ಯಾಮಲಾ ನಂದಿತಾ ಜೊತೆಗೆ ಹೊರಟೊಡನೆ, ಅಲ್ಲಿಗೆ ಬಂದಿದ್ದ ರಾಂರಾವ್ ನಾಯಕ್, ದಾವಣಗೇರಿ ಮತ್ತು ಕೋಟಾ ಶೆಟ್ಟಿಯೂ ಸಹ ಮೆಲ್ಲಗೆ ಅಲ್ಲಿಂದ ತಪ್ಪಿಸಿಕೊಳ್ಳುತ್ತಾರೆ. ಕೋಪದಲ್ಲಿ ಮುಂದೇನಾಗುತ್ತದೆ ಎಂದು ಕೇಳುವ ಹೊಸಮನೆಗೆ ‘ಈ ಪುಸ್ತಕ ಸಹ ಸಾಕ್ಷಿಯಾಗುತ್ತದೆ. ನೀವೇ ಅಪರಾಧಿ ಆಗಬಹುದು’ ಎನ್ನುವ ಕವಿತಾ. ಆ ಮಾತು ಕೇಳಿದೊಡನೆ ಏನೋ ನಿರ್ಧರಿಸಿದಂತೆ ಬಾಲು ಮತ್ತು ಮುದ್ದೆಗೆ ಕೆಲಸ ಹೇಳುವ ಹೊಸಮನೆ ಸದಾನಂದ. ಆ ಮಾತುಗಳನ್ನ ಕೇಳಿ ಕವಿತಾ ಭಯಗೊಳ್ಳುತ್ತಾಳೆ.

*

ಪೂರ್‍ವಿಯು ಹೊಸಮನೆಯ ಮನೆಗೆ ಹೋಗಿದ್ದೇ ತಪ್ಪು ಎಂದು ಅವಳನ್ನು ಬಯ್ಯುವ ಮೇಘಾಳು ಹೊಸಮನೆಯು ಶ್ಯಾಮಲಾಳ ಪುಸ್ತಕವೇ ಹೊರಗೆ ಬಾರದಂತೆ ಮಾಡುತ್ತಾನೆ ಎಂದಾಗ ತಾನು ತನ್ನ ಹೋರಾಟವನ್ನು ಎಲ್ಲಾ ಅಡ್ಡಿಗಳ ಜೊತೆಗೆ ಮುಂದುವರೆಸುತ್ತೇನೆ ಎನ್ನುವ ಪೂರ್‍ವಿ. ಆಗಲೇ ಮೇಘಾಳಿಗೆ ಫೋನ್ ಮಾಡುವ ಸುಕನ್ಯಾ ಆಕೆಯನ್ನು ತನ್ನ ಮನೆಗೆ ಕರೆಯುತ್ತಾಳೆ.
ಸುಕನ್ಯಾ ಮನೆಯಲ್ಲಿ ಪೂರ್‍ವಿಯನ್ನು ಕಾಪಾಡುವ ಮಾತಾಡುತ್ತಾ ಹೊಸಮನೆ ಸದಾನಂದನ ಎದುರಿಗೆ ಚುನಾವಣೆಯಲ್ಲಿ ಮೇಘಾ ನಿಲ್ಲಬೇಕು ಎನ್ನುತ್ತಾಳೆ. ಮೇಘಾ ಬೆರಗಾಗುತ್ತಾಳೆ.

*

ಮೇಘಾ ತಾನು ಯಾವುದೇ ತೀರ್‍ಮಾನಕ್ಕೆ ಬರುವುದಕ್ಕೆ ತನ್ನವರ ಅಭಿಪ್ರಾಯ ತಿಳಿದುಕೊಳ್ಳುತ್ತೇನೆ ಎನ್ನುತ್ತಾಳೆ.
ಮಿತ್ರಾ ಮೇಘಾಳಿಗೆ ರಾಜಕೀಯ ಪ್ರವೇಶ ಬೇಡ ಎನ್ನುತ್ತಾನೆ. ಅಲ್ಲಿರುವ ಇತರರು ಸಹ ಮಿತ್ರಾನ ಮಾತಿನಂತೆಯೇ ಸಾಗಬೇಕು ಎನ್ನುತ್ಥಾರೆ. ಮೇಘಾ ಆ ಬಗ್ಗೆ ಯೋಚಿಸುತ್ತಾ ಇರುವಾಗಲೇ ಪೂರ್‍ವಿಯು ಫೋನ್ ಮಾಡಿ ಶ್ಯಾಮಲಾ ತೀರಿಕೊಂಡಿದ್ದಾಳೆ ಎನ್ನುತ್ತಾಳೆ. ಮೇಘಾ ಅಚ್ಚರಿಯಲ್ಲಿ ಉಳಿಯುತ್ತಾಳೆ