h1

ಪ್ರಕರಣ ೧೩೫೨

May 17, 2009

ಪ್ರಸಾರ : ೨೦ ಮೇ ೨೦೦೯, ಬುಧವಾರ

ಹೊಸಮನೆ ಸದಾನಂದನು ದಿನಪತ್ರಿಕೆಯ ಸಂಪಾದಕರೊಬ್ಬರ ಜೊತೆಗೆ ಮಾತಾಡಿ ಆತನ ಪತ್ರಿಕೆಯಲ್ಲಿ ಬರಬೇಕಾದ ವಿವರಗಳನ್ನು ಕುರಿತು ತಿಳಿಸುತ್ತಾನೆ. ಆ ವರದಿಯನ್ನು ಓದುತ್ತಾ ಸುಕನ್ಯಾ ತಂಡ ಮುಳುಗಬೇಕು ಎನ್ನುತ್ತಾನೆ. ಹೊಸಮನೆಯು ತಾನು ಮಾಡಿರುವ ಯೋಜನೆ ಕುರಿತು ರಾಂರಾವ್ ನಾಯಕ್‌ಗೆ ವಿವರಿಸಿದಾಗ ನಾಯಕ್ ಸಂತೋಷಪಡುತ್ತಾನೆ.
ಮೇಘಾಳು ಕಲ್ಯಾಣಿಯ ಜೊತೆಗೆ ಪಟೇಗಾರ ಹಾಗೂ ಮಹಾಮಾತೆ ಲಲಿತಾನಂದಮಯಿಯನ್ನು ಭೇಟಿಯಾಗಿ ಸುಬ್ಬರಾಮು ಕುರಿತು ಮಾತಾಡುತ್ತಾಳೆ. ಪ್ರತಿಯೊಬ್ಬರೂ ತಮ್ಮ ಅನುಮಾನಗಳನ್ನು ಹೇಳುತ್ಥಾ ಸಾಗಿದಂತೆ ಸುಬ್ಬರಾಮು ಮಠಕ್ಕೆ ಹೋಗಿರಬಹುದು ಎಂಬುದು ಖಾತ್ರಿಯಾಗುತ್ತದೆ. ಅಲ್ಲಿಗೆ ಹೋಗಿ ಸುಬ್ಬರಾಮುವನ್ನು ಸುರಕ್ಷಿತವಾಗಿ ವಾಪಸ್ ತರುವ ಜವಾಬ್ದಾರಿಯನ್ನು ಪಟೇಗಾರನಿಗೆ ವಹಿಸಲಾಗುತ್ತದೆ.

*

ಮಠದಲ್ಲಿರುವ ರಂಗನಾಥನ ಭಂಟರನ್ನು ತನಗೆ ಬೇಕಾದಂತೆ ಕುಣಿಸುವ ಸುಬ್ಬರಾಮು. ಭಂಟರು ಅವನ ಸೇವೆಯಲ್ಲಿ ತೊಡಗಿರುವಾಗಲೇ ಅಲ್ಲಿಗೆ ಬರುವ ಪಟೇಗಾರನಿಗೆ ಅದನ್ನು ಕಂಡು ಅಚ್ಚರಿ. ಪಟೇಗಾರ ತಾನು ಸುಬ್ಬರಾಮು ಜೊತೆಗೆ ಪ್ರತ್ಯೇಕವಾಗಿ ಮಾತಾಡಬೇಕೆಂದು ಬೇರೊಂದೆಡೆಗೆ ಕರೆದೊಯ್ಯುತ್ತಾನೆ.
ರಂಗನಾಥ ಮಠದಲ್ಲಿಲ್ಲದ ಸಮಯ ನೋಡಿಕೊಂಡು ಹೊರಟುಬಿಡು. ಇಲ್ಲಿದ್ದರೆ ಸುಬ್ಬರಾಮುವನ್ನ ಕೊಲ್ಲುತ್ತಾರೆ ಎನ್ನುವ ಪಟೇಗಾರನ ಮಾತು ಕೇಳಿ ಸುಬ್ಬರಾಮು ಅಚ್ಚರಿಯಲ್ಲಿ ಉಳಿಯುತ್ತಾನೆ.

*

ಸುಬ್ಬರಾಮು ತಾನು ಬಚವಾಗುವುದಕ್ಕಿಂತ ತನ್ನ ಅಳಿಯನ್ನ ಇಲ್ಲಿಂದಾಚೆಗೆ ಕರೆದೊಯ್ಯುವುದು ಮುಖ್ಯ ಎಂಬ ಮಾತಾಡುವಾಗಲೇ ಅಲ್ಲಿಗೆ ಬರುವ ರಂಗನಾಥ ಅದು ಸಾಧ್ಯವಿಲ್ಲ ಎನ್ನುತ್ಥಾನೆ. ಸುಬ್ಬರಾಮುವಿಗೆ ಬೇಕಾಗಿರುವುದು ಇನ್ನೆರಡು ದಿನದಲ್ಲಿ ಸಿಗಲಿದೆ ಎಂದು ತಿಳಿಸುತ್ತಾನೆ. ಸುಬ್ಬರಾಮುವನ್ನ ಮರಳಿ ಮಠದೊಳಗಡೆಗೆ ಕಳಿಸಿ, ಪಟೇಗಾರನಿಗೆ ಸಾಯುವ ಧಮಕಿ ಹಾಕುವ ರಂಗನಾಥನಿಂದ ಭಯಗೊಂಡ ಪಟೇಗಾರ ಚೀರತೊಡಗುತ್ತಾನೆ.

Advertisement

One comment

  1. hello.. i wish i could read this blog.. :(



Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s

Follow

Get every new post delivered to your Inbox.